ದೇವರು ಪರಿಹಾಸ್ಯ ಮಾಡಲ್ಪಡುವಾತನಲ್ಲ; ಯಾಕಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.
ಓ, ಇದು ಒಂದು ರೀತಿ ಕರ್ಮ ಆಗಿರುತ್ತದೆ…….ಇಲ್ಲ ಇದು ಕರ್ಮದ ರೀತಿಯಲ್ಲ! ಇದು ಗಲಾತ್ಯ : ರಂತೆ. ಇದು
ಬಿತ್ತುವದು ಮತ್ತು ಕೊಯ್ಯುವ ರೀತಿಯದ್ದು. ಇದು ನೀವು ಬಿತ್ತಿದ್ದನ್ನು ಕೊಯ್ಯುವ ರೀತಿ. ಇದು ಕರ್ಮ ಅಲ್ಲ.
ಆದರೂ ಇಲ್ಲಿ ಅಸಕ್ತಿಕರವೇನೆಂದರೆ, ಮೂಲಭಾಷೆಯಲ್ಲಿ,ಸಂಸ್ಕೃತದಲ್ಲಿ ಅಕ್ಷರಶಃ
“ಕರ್ಮ” ವೆಂಬ ಪದವು ನಿಜವಾಗಿಯೂ “ಕೆಲಸಗಳು” ಎಂಬ ಅರ್ಥವಾಗಿದೆ. ಕ್ರಿಯೆಗಳು.
ಇದರರ್ಥ ನೀವು ಮಾಡುವಂಥ “ಕಾರ್ಯಗಳು”, ಅಥವಾ “ಕ್ರಿಯೆಗಳು” ಅಥವಾ “ಕೆಲಸಗಳು”. ಇದು ಆಸಕ್ತಿಕರವಲ್ಲವೇ, ಹಿಂದುತ್ವದಲ್ಲಿ
ರಕ್ಷಣೆಯು “ಕ್ರಿಯೆಗಳನ್ನು” ಆಧರಿಸಿದೆ. ಯಾಕೆಂದರೆ ಒಳ್ಳೆ ಕರ್ಮವಿದ್ದರೆ ಅದು ನಿಮಗೆ
ಉತ್ತಮ ಪುನರ್ಜನ್ಮ ನೀಡುತ್ತದೆ ಮತ್ತು ಕೊನೆಗೆ ಪರಲೋಕವಲ್ಲ ಆದರೆ
ನಿರಂತರವಾಗಿ ಸಾಗುವ ಪುನರಪಿ ಜನನ ಪುನರಪಿ ಮರಣ ಚಕ್ರಕ್ಕೆ ಸೇರಿಸುತ್ತದೆ. ಆವರು ಆ ಉಚ್ಛಘಟ್ಟವನ್ನು, ಮೋಕ್ಷ ತಲುಪುವರು
ಅವರು ಅಲ್ಲಿ ಹೇಗೆ ಮುಟ್ಟುತ್ತಾರೆ? “ ಕ್ರಿಯೆಗಳು” ಅವರು ಕರ್ಮ ಎಂದು ಹೇಳುವಾಗ ಅವರ
ಅರ್ಥ ಇದೇ ಆಗಿದೆ. “ಕೆಲಸಗಳು” ಎಂದು ಅವರೆನ್ನುತ್ತಾರೆ. ಆದರೆ ರಕ್ಷಣೆ “ ಕ್ರಿಯೆಗಳಿಂದಲ್ಲ” ಎಂದು ಬೈಬಲ್ ಹೇಳುತ್ತದೆ
“ ಹೊಗಳಿಕೊಳ್ಳುವದಕ್ಕೆ ಯಾವನಿಗೂ ಆಸ್ಪದವಿಲ್ಲ”. ಬೈಬಲ್ ಹೇಳುತ್ತದೆ, “ ನಾವು ಕೃಪೆಯಿಂದ ನಂಬಿಕೆಯ ಮೂಲಕವೇ
ರಕ್ಷಣೆ ಹೊಂದಿದ್ದೇವೆ. ಅದು ನಮ್ಮಿಂದಾದದ್ದಲ್ಲ, ಅದು ದೇವರ ವರ: ಅದು ಕ್ರಿಯೆಗಳಿಂದಲ್ಲ, ಆದ್ದರಿಂದ ಯಾರಿಗೂ ಹೊಗಳಿಕೊಳ್ಳಲು
ಆಸ್ಪದವಿಲ್ಲ,” ಮತ್ತು ಬೈಬಲ್ ನಮಗೆ ಕೃಪೆ ಹಾಗೂ ಕ್ರಿಯೆಗಳು ಸಮಾನವಾಗಲಾರವು ಎಂದು ಸ್ಪಷ್ಟವಾಗಿ ಕಲಿಸುತ್ತದೆ. ಯಾಕೆಂದರೆ
“ಇದು ಕೃಪೆಯಿಂದಾಗಿದ್ದರೆ, ಅಲ್ಲಿ ಕ್ರಿಯೆಗಳಿಗೆ ಆಸ್ಪದವಿಲ್ಲ.” ಆತನು ಮುಖ್ಯವಾಗಿ ಹೇಳುತ್ತಿರುವದೇನೆಂದರೆ ಅದು ಕೃಪೆಯಿಂದ ಆದಲ್ಲಿ
ಅದು ಕರ್ಮ ಅಲ್ಲ, ಅದು ನಿಮ್ಮನ್ನು ಎಲ್ಲಿಯೂ ಕೊಂಡೊಯ್ಯಲಾರದು. ಆತನು ಹೇಳುತ್ತಾನೆ, “ ಇದು ಕೃಪೆಯಿಂದಾಗಿದ್ದರೆ, ಅಲ್ಲಿ
ಕ್ರಿಯೆಗಳಿಗೆ ಅವಕಾಶವೇ ಇಲ್ಲ, ಇಲ್ಲವಾದರೆ ಕೃಪೆಯು ಕೃಪೆಯಾಗಿ ಇರಲು ಸಾಧ್ಯವಿಲ್ಲ. ಆದರೆ ಅದು ಕ್ರಿಯೆಗಳಿಂದಾಗಿದ್ದರೆ, ಅದು
ಇನ್ನು ಕೃಪೆಯಾಗಿರಲಾರದು. ಇಲ್ಲವಾದರೆ ಕ್ರಿಯೆಗಳು ಕ್ರಿಯೆಯಾಗಿರಲು ಸಾದ್ಯವಿಲ್ಲವಷ್ಟೆ.ಅದು ಎರಡೂ ಆಗಿರಲಾರದು. ಮತ್ತು ಅವರು ಹೇಳುತ್ತಾರೆ, “ಓ, ನಾವು
ಈ ಒಳ್ಳೇ ಕ್ರಿಯೆಗಳನ್ನು ಮಾಡಿದರೆ, ನಮಗೆ ಕೃಪೆ ಸಿಕ್ಕುತ್ತದೆ”.ಹಿಂದುಗಳು ಅದನ್ನೇ ಬೋಧಿಸುತ್ತಾರೆ. ಇಲ್ಲ.
ತಪ್ಪು. ನೀವು ಒಳ್ಳೆ ಕ್ರಿಯೆಗಳನ್ನು ಮಾಡುವದರಿಂದ ಕೃಪೆಯನ್ನು ಪಡೆಯುವದಿಲ್ಲ. ಆಪದಗಳಲ್ಲೇ ತದ್ವಿರುದ್ಧವಿದೆ. ಕೃಪೆ ಎಂಬದು
ಯೋಗ್ಯವಲ್ಲದವರಿಗೆ ಸಿಕ್ಕ ದಯೆ. ನೀವು ಯಾವದಕ್ಕೆ ಯೋಗ್ಯರಲ್ಲವೋ ಅದನ್ನು ಪಡೆದರೆ ಅದು ಕೃಪೆ, ಮತ್ತು
ಅದು ಕ್ರಿಯೆಗಳಿಂದಾದದ್ದಲ್ಲ, ಯಾವನೂ ಹೊಗಳಿಕೊಳ್ಳದಿರಲಿ. ಆದ್ದರಿಂದ ಈ “ಕರ್ಮ” ಎಂಬ ಪದವು ಕ್ರೈಸ್ತರಾದ ನಾವು ಉಪಯೋಗಿಸುವ
ಪದವಲ್ಲ.ನಾವು ಕ್ರೈಸ್ತ ಪದಗಳನ್ನು ಉಪಯೋಗಿಸಬೇಕು ಹೊರತು ಹಿಂದು ಪದಗಳನ್ನಲ್ಲ
ಮತ್ತು ಇದು ನಮ್ಮ ಮನಸ್ಸುಗಳಲ್ಲಿಯೂ ಭಾಷೆಗಳಲ್ಲಿಯೂ ನುಸಳಲು ಬಿಡಬಾರದು.
ಥೆಸಲೋನಿಕ ನೇ ಅಧ್ಯಾಯವನ್ನು ತೆರೆಯಿರಿ. ಹಿಂದುತ್ವದ ಇನ್ನೊಂದು ಸುಳ್ಳು ಉಪದೇಶವೆಂದರೆ, “ ಜನರು ಪರಲೋಕ ಅಥವಾ
ನರಕಕ್ಕೆ ಹೋಗುತ್ತಾರೆ, ಆದರೆ ಅದು ತಾತ್ಕಾಲಿಕ. ಅವರು ದಂಡಿಸಲ್ಪಡುತ್ತಾರೆ, ಅಥವಾ ಪ್ರತಿಫಲ ಪಡೆಯುತ್ತಾರೆ, ಆದರೆ
ಬಳಿಕ ಅವರು ಮರುಜನ್ಮ ಪಡೆಯುತ್ತಾರೆ ಮತ್ತು ಅವರು ಪುನರ್ಜನ್ಮಗೊಳ್ಳುತ್ತಾರೆ, ಹೀಗೆ ಇದು ತಾತ್ಕಾಲಿಕವಾದದ್ದು. ಆದರೆ ಬೈಬಲ್ ನಮಗೆ
ರಕ್ಷಣೆ ಹೊಂದುವದು, ಮತ್ತು ಪರಲೋಕ ಹೋಗುವದೂ ನರಕಕ್ಕೆ ಹೋಗುವದು ಎಲ್ಲಾ ಶಾಶ್ವತವಾದ ಸ್ಥಿತಿಗಳು ಎಂದು ಹೇಳುತ್ತದೆ
ನೀವು ಥೆಸಲೋನಿಕ : ನೋಡಿರಿ. ಅದು ಹೇಳುತ್ತದೆ, “ ಆಮೇಲೆ ಜೀವದಿಂದುಳಿದಿರುವ ನಾವು
ಅಂತರೀಕ್ಷದಲ್ಲಿ ಕರ್ತನನ್ನು ಎದುರ್ಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೇ
ಒಯ್ಯಲ್ಪಡುವೆವು.” ಇದನ್ನು ಸ್ವಲ್ಪ ಕೇಳಿಸಿಕೊಳ್ಳಿರಿ, “ ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು”. ಒಮ್ಮೆ ನಾವು
ಪರಲೋಕದಲ್ಲಿ ಕರ್ತನ ಸಂಗಡ ಇರುವದಕ್ಕೆ ಎತ್ತಲ್ಪಟ್ಟವೆಂದರೆ, ಅದು ಸದಾಕಾಲ ಕರ್ತನ ಜೊತೆಯಲ್ಲಿರುವದಕ್ಕಾಗಿ ಎಂದು ಬೈಬಲ್ ಹೆಳುತ್ತದೆ.
ಅದು ತಾತ್ಕಾಲಿಕವಲ್ಲ” ಕರ್ತನ ಸಂಗಡವಿರುವದು. ಮತ್ತೆ ಆಮೇಲೆ ಕರ್ತನ ಸಂಗಡವಿರುವದಿಲ್ಲ” ಎಂದಲ್ಲ. ಈಗ ನೀವು ಹೇಳಬಹುದು
“ ಸರಿ, ಆದರೆ ಹೊಸಭೂಮಿ ಮತ್ತು ಹೊಸ ಆಕಾಶಗಳ ವೇಳೆಯಲ್ಲಿ ನಾವು ಈ ಭೂಮಿಯ ಮೇಲೆ ಜೀವಿಸಲಿದ್ದೇವಲ್ಲವೇ?” ಹೌದು, ಆದರೆ
ನಾವು ಕ್ರಿಸ್ತನ ಸಂಗಡ ಈ ಭೂಮಿಯಲ್ಲಿ ಆಳ್ವಿಕೆಮಾಡಲಿದ್ದೇವೆ. ನಾವು ಕರ್ತನ ಸಂಗಡ
ಇರಲಿದ್ದೇವೆ. ನಾನು ನಿಮಗೆ ಇದನ್ನು ಸೈದ್ಧಾಂತಿಕವಾಗಿ ಬಿಡಿಸಿ ಹೇಳುತ್ತೇನೆ. ಕ್ರೈಸ್ತರಾಗಿ ನಾವು ಬೈಬಲಿನಿಂದ
ಏನನ್ನು ನಂಬುತ್ತೇವೆ ಮತ್ತು ಪರಲೋಕದ ಸಿದ್ಧಾಂತ ಏನೆಂಬದನ್ನು ತಿಳಿದಿರುವದು ಪ್ರಾಮುಖ್ಯವಾದದ್ದು. ನಮಗೆ ಬೈಬಲ್
ಇದನ್ನು ಕಲಿಸುತ್ತದೆ: ರಕ್ಷಣೆ ಹೊಂದಿರುವ ನೀವು ಇವತ್ತು ಸಾಯುದಾದರೆ, ಮತ್ತು ನಿಮ್ಮಲ್ಲಿ ಯೇಸು ಕ್ರಿಸ್ತನನ್ನು ಹೊಂದಿರುವದಾದರೆ
ಮತ್ತು ನೀವು ರಕ್ಷಣೆ ಹೊಂದಿದ್ದರೆ, ನೀವು ನಿಮ್ಮ ಕೊನೆ ಉಸಿರುಬಿಡುವಾಗ ನಿಮ್ಮ ಆತ್ಮವು ಪರಲೋಕದಲ್ಲಿರುವದು
ಆತ್ಮನಿದ್ರೆ ಅಥವಾ ಸಮಾಧಿಯಲ್ಲಿ ಕಾಯ್ದುಕೊಂಡಿರುವಿಕೆ ಎಂಬುದೇನೂ ಇಲ್ಲ. ನಿಮ್ಮ ದೇಹವು ಸಮಾಧಿಯಲ್ಲಿ ಕಾಯುತ್ತದೆ,
ಆದರೆ ನಿಮ್ಮ ಆತ್ಮವು ತಕ್ಷಣವೇ ಪರಲೋಕಕ್ಕೆ ಹೋಗುತ್ತದೆ, ಯಾಕೆಂದರೆ ಬೈಬಲ್ ಹೆಳುತ್ತದೆ, “ ದೇಹವನ್ನು ಬಿಡುವದೆಂದರೆ
ಕರ್ತನೊಂದಿಗೆ ಇರುವದಾಗಿದೆ”. ಪೌಲನು ಹೇಳುತ್ತಾನೆ, “ ನಾನು ಇಲ್ಲಿಂದ ಹೋಗಿಬಿಟ್ಟು ಕ್ರಿಸ್ತನ ಜೊತೆಯಲ್ಲಿರಬೇಕೆಂಬದೇ ನನ್ನ ಅಭಿಲಾಷೆ
ಅದು ಉತ್ತಮೊತ್ತಮ; ನನಗಂತೂ ಬದುಕುವದೆಂದರೆ ಕ್ರಿಸ್ತನೇ, ಸಾಯುವದು ಲಾಭವೇ
ದೇಹವನ್ನು ಬಿಟ್ಟು ಹೋಗುವದೆಂದರೆ ಕರ್ತನ ಸಂಗಡ ಇರುವದಾಗಿದೆ.” ಕ್ರಿಸ್ತನು ಮೇಘಗಳ ಮೇಲೆ ಬರೋಣದ ವೇಳೆ ಥೆಸಲೋನಿಕ
ರಲ್ಲಿ ಇದೇ ಸಂಭಿವಿಸುತ್ತದೆ- ಇದನ್ನೆ ಅನೇಕ ವೇಳೆ ಎತ್ತಲ್ಪಡುವಿಕೆ ಎಂದು ಕರೆಯಲಾಗುತ್ತದೆ.
ಕ್ರಿಸ್ತನಲ್ಲಿ ನಿದ್ರೆಹೋಗಿರುವವರನ್ನು ದೇವರು ಅವರನ್ನು ಕ್ರಿಸ್ತನ ಸಂಗಡ ತರುವನು.ಕ್ರಿಸ್ತನು ಈ ಭೂಮಿಗೆ ತಿರುಗಿ ಬರುವಾಗ,
ಆತನು ಅವರನ್ನು ತನ್ನೊಂದಿಗೆ ಮೇಘಗಳ ಮೇಲೆ ಕರೆತರುವನು, ಮತ್ತು ನಂತರ ಅವರು ಆತನ ಸಂಗಡ ಪರಲೋಕದಲ್ಲಿರುವರು.
ಬಳಿಕ ಆತನು ಭೂಮಿಯಲ್ಲಿ ಸ್ಥಾಪಿಸುವಾಗ, ಅವರು ಬಂದು ಆತನ ಸಂಗಡ ಆಳ್ವಿಕೆ ಮಾಡುವರು
ನಂತರ, ಅಂತ್ಯದಲ್ಲಿ, ಹೊಸ ಭೂಮಿ, ಹೊಸ ಪರಲೋಕ ಸೃಷ್ಟಿಸಲ್ಪಟ್ಟ ಮೇಲೆ, ಕುರಿಯಾದಾತನು
ಅವರ ಮಧ್ಯದಲ್ಲಿ ವಾಸಿಸುವನು. ಆದ್ದರಿಂದ ಒಮ್ಮೆ ರಕ್ಷಣೆ ಹೊಂದಿದರೆ ಭೂಮಿಯಲ್ಲಿ ಪುನರ್ಜನ್ಮ ಹೊಂದುವದಿಲ್ಲ ಅಥವಾ ನಮ್ಮ ರಕ್ಷಣೆಯನ್ನು ಕಳೆದುಕೊಳ್ಳುವದಿಲ್ಲ
ಅಥವಾ ಪರಲೋಕಕ್ಕೆ ಹೋಗಿ ಆಮೇಲೆ ಅಲ್ಲಿಂದ ಒದ್ದೊಡಿಸಲ್ಪಡುವದಿಲ್ಲ. ಇಲ್ಲ. ನೀವು ಒಮ್ಮೆ ರಕ್ಷಣೆ ಹೊಂದಿದರೆ, ನೀವು
ಸದಾಕಾಲವೂ ಕರ್ತನೊಂದಿಗಿರುವಿರಿ. ಅದು ಪರಲೋಕವಾಗಿರಬಹುದು ಅಥವಾ ಸಹಸ್ರಮಾನ ಆಳ್ವಿಕೆಯಾಗಿರಬಹುದು,
ಅಥವಾ ಹೊಸ ಭೂಮಿ, ಹೊಸ ಆಕಾಶದ ವೇಳೆಯಾಗಿರಬಹುದು. ಹೇಗಿದ್ದರೂ ನೀವು ನಿತ್ಯಕಾಲಕ್ಕೂ ಕರ್ತನ ಸಂಗಡವಿರುವಿರಿ.
ನೀವು ಯೇಸುವಿನ ಸಂಗಡ ಇರಲಿರುವಿರಿ. ಅಷ್ಟೇ. ಮತ್ತು ನರಕದ ವಿಷಯದಲ್ಲಿ ಸಹ ಇದೇ ರೀತಿ ಇರುತ್ತದೆ. ನಾನು ನಿಮಗೆ
ಈ ವಿಷಯವಾಗಿ ಒಂದು ಚಿಕ್ಕ ವಚನವನ್ನು ಮುಂದಿಡುತ್ತೇನೆ: ಪ್ರಕ : " ಇದಲ್ಲದೆ ಅವರನ್ನು ಮರುಳುಗೊಳಿಸಿದ ಸೈತಾನನು
ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು; ಅಲ್ಲಿ ಮೃಗವೂ ಸುಳ್ಳು ಪ್ರವಾದಿಯೂ ಕೂಡ ಇದ್ದಾರೆ;
ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು.” ಒಂದು ವೇಳೆ ಮೊದಲ ನಿತ್ಯತ್ವವನ್ನು ಪಡೆದಿಲ್ಲವಾದರೆ
ಆತನು ಹೇಳುತ್ತಾನೆ, “ ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು.”
ನರಕವು ನಿತ್ಯನಿತ್ಯವಾದದ್ದೆಂಬ ಸತ್ಯವನ್ನು ಮನದಟ್ಟುಗೊಳಿಸಲು ಅದು ಸಾಕು.ನರಕದ ಕುರಿತು ಅದು ಇಡೀ ಸಂದೇಶವೇ ಆಗಿರುತ್ತದೆ.
ಹಾಗಾದರೆ ಧರ್ಮೋಪದೇಶಕಾಂಡ ನೇ ಅಧ್ಯಾಯಕ್ಕೆ ತಿರುಗಿಸಿ. ನಾನು ಮುಕ್ತಾಯವನ್ನು ನೀಡಲಿಚ್ಚಿಸುತ್ತೇನೆ. ಆದರೆ ಅದನ್ನು ನಾನು ಮಾಡುವ
ಮುಂಚೆ, ಕ್ಲುಪ್ತವಾಗಿ ಹಿಂದುತ್ವದ ಸುಳ್ಳು ಬೋಧನೆಯನ್ನೊಮ್ಮೆ ಪರಿಶೀಲಿಸುತ್ತೇನೆ. ಆ ಸುಳ್ಳು ಬೋಧನೆಗಳು
ಯಾವವು? ಸರಿ, ಮೊದಲನೆಯದಾಗಿ, ದೇವರನ್ನು ಯಾವ ಹೆಸರಿನಿಂದಾದರೂ ಕರೆಯಬಹುದು, ಅದೇನೂ ಪ್ರಾಮುಖ್ಯವಲ್ಲ
ಎಂದು ಅವರು ಹೇಳುತ್ತಾರೆ. ಆದರೆ ಬೈಬಲ್ ದೇವರನ್ನು ಯಾವ ಹೆಸರಿನಿಂದ ಕರೆಯುತ್ತೇವೆಂಬದು ಅತ್ಯಂಥ ಪ್ರಾಮುಖ್ಯವೆನ್ನುತ್ತದೆ. ಅಲ್ಲದೆ
ದೇವರು ನಮಗೆ ಸುಳ್ಳುದೇವರುಗಳ ಹೆಸರನ್ನು ಅಸಹ್ಯಿಸಬೇಕು, ಅವುಗಳನ್ನು ಉಚ್ಚರಿಸಲೂಬಾರದೆಂದು ಹೇಳುತ್ತಾನೆ.
ಆ ಹೆಸರುಗಳನ್ನು ಎತ್ತಲೂಬಾರದು. ಅವುಗಳನ್ನು ಮರೆತುಬಿಡಬೇಕು, ನಾಶಗೊಳಿಸಬೇಕೆಂದು ಹೇಳಿದನು. ಸುಳ್ಳುದೇವರುಗಳ
ವಿಷಯದಲ್ಲಿ ಅದನ್ನೇ ನಮಗೆ ತಿಳಿಸಲಾಗಿರುತ್ತದೆ. ಆದ್ದರಿಂದ ಅದೊಂದು ಪ್ರಮುಖ ಸುಳ್ಳು ಬೋಧನೆ.ಎರಡನೆಯದಾಗಿ
ಯೇಸುವಿನ ಹೆಸರನ್ನು ಅವರು ರಕ್ಷಕನು, ಸರ್ವಶಕ್ತನು ಮತ್ತು ಏಕ ಸತ್ಯ ದೇವರೆಂದು ಅರಿಕೆಮಾಡುವದಿಲ್ಲ.
ಮೂರನೆಯದಾಗಿ, ಹಿಂದುತ್ವದ ದೇವರು ಸೈತಾನನು ಯಾಕೆಂದರೆ ಆತನು ವಿಗ್ರಹಾರಾಧನೆಯಿಂದ ಪ್ರತಿನಿಧಿಸಲ್ಪಡುತ್ತಾನೆ ಎಂಬದನ್ನು ಕಲಿತೆವು.
ವಿಗ್ರಹಗಳಿಗೆ ಬಲಿಗಳನ್ನು ಅರ್ಪಿಸುವವರು ದೆವ್ವಗಳಿಗೆ ಅದನ್ನು ಅರ್ಪಿಸುವವರಾಗಿದ್ದಾರೆಂದು ಬೈಬಲ್ ಹೇಳುತ್ತದೆ.
ಅಲ್ಲದೆ ಅವರ ದೇವರುಗಳು ಬೈಬಲಿನ ದೇವರಿಗಿರುವ ಗುಣಲಕ್ಷಣಗಳನ್ನು ಹೊಂದಿಲ್ಲವೆಂಬದನ್ನು ಸಹ ನಾವು ನೋಡಿದೆವು.
ಉದಾಹರಣೆಗೆ, ಅವರ ದೇವರು ಶೀಘ್ರಕೋಪಿಷ್ಠನು ಮತ್ತು ಅರ್ಧನಾರಿ ಹಾಗೂ ಅರ್ಧಪುರುಷನಾಗಿದ್ದಾನೆ. ಇವುಗಳು
ಬೈಬಲಿನ ದೇವರ ಗುಣಲಕ್ಷಣಗಳಲ್ಲ. ಅಲ್ಲದೆ ಹಿಂದುತ್ವದ ದೇವರು ಸ್ಪಷ್ಟವಾಗಿ ಸೈತಾನನು ಯಾಕೆಂದರೆ ಆತನ
ಚಿತ್ರಗಳಲ್ಲಿ ಸರ್ಪಗಳ ಮತ್ತು ಬುರುಡೆಗಳು ಹಾಗೂ ಬೈಬಲ್ ತಿಳಿಸುವ ಸೈತಾನನ(ಪಿಶಾಚಿಯ) ಸಂಬಂಧಿಸಿದ ಎಲ್ಲಾ
ಪೈಶಾಚಿಕ ವಿಧವಾದ ಸಂಗತಿಗಳನ್ನೆಲ್ಲಾ ಅಲ್ಲಿ ಕಾಣುತ್ತೇವೆ. ಅವರು ಅಕ್ಷರಶಃ ಸೈತಾನನ್ನೇ
ಪೂಜಿಸುವವರಾಗಿದ್ದಾರೆ- ಅಥವಾ ಅವರು ಒಬ್ಬ ಸ್ತ್ರೀದೇವತೆಯನ್ನು ಪೂಜಿಸುತ್ತಾರೆ, ಅದು ಬೈಬಲ್
ನಮಗೆ ದೇವರು ಒಬ್ಬ ಪುರುಷನೆಂದು ತಿಳಿಸುವ ವಿಚಾರಕ್ಕೆ ಸಂಪೂರ್ಣ ತದ್ವಿರುದ್ಧವಾಗಿರುತ್ತದೆ, ಅದು ಮಾತ್ರವಲ್ಲ, ಅವರು
ತಾವು ಕ್ರಷ್ಣನನ್ನು ನಂಬುತ್ತೇವೆಂದು ಹೇಳಿದರೂ, ಅದು ಬೈಬಲಿನ ಯೇಸುವಾಗಿರುವದಿಲ್ಲ. ಅವರು ಪುನರ್ಜನ್ಮದಲ್ಲಿ
ನಂಬುತ್ತಾರೆ. ನಾವಾದರೋ ದೇಹದ ಪುನರುತ್ಥಾನದಲ್ಲಿ ವಿಶ್ವಾಸಿಸುತ್ತೇವೆ- ಒಂದೇ ಸಾರಿ ಸಾಯುವದೂ
ಒಂದೇ ಸಾರಿ ಪುನರುತ್ಥಾನಗೊಳ್ಳುವದು. ಅವರು ಕರ್ಮದಿಂದ ಮುಕ್ತಿಯೆಂದು ನಂಬುತ್ತಾರೆ, ಅವರ ಭಾಷೆಯಲ್ಲಿ ಅದರರ್ಥ ಕ್ರಿಯೆಗಳಿಂದ ರಕ್ಷಣೆ.
ನಾವು ಕೃಪೆಯಿಂದ ನಂಬಿಕೆಯ ಮೂಲಕವೇ ರಕ್ಷಣೆ ಹೊರತು ಕ್ರಿಯೆಗಳಿಂದಲ್ಲ ಎಂದು ನಂಬುತ್ತೇವೆ. ನಾವು ಯಾವದೇ
ಆಚಾರಗಳನ್ನು ಮಾಡಬೇಕಿಲ್ಲ, ನಾವು ಮಂತ್ರಗಳನ್ನು ಪಠಿಸಬೇಕಿಲ್ಲ ಅಥವಾ ಬಲಿಗಳನ್ನು ಅರ್ಪಿಸಬೇಕಿಲ್ಲ ಅಥವಾ
ದೇವಸ್ಥಾನಗಳಿಗೆ ಭೇಟಿಕೊಡಬೇಕಿಲ್ಲ ಮತ್ತು ಯಜ್ಞೋಪವಿಧಿಗಳನ್ನು ನಡಿಸುವ, ಮಂತ್ರಗಳನ್ನು ಪಠಿಸುವ ಅಗತ್ಯವಿಲ್ಲ ಮತ್ತು
ಯೋಗವನ್ನು ಮಾಡಿ ಮೋಕ್ಷಪಡೆಯುವ ಅಗತ್ಯವಿಲ್ಲ. ಆ ಕ್ರಿಯೆ ಮತ್ತು ಆಚಾರಗಳನ್ನು ಮಾಡಿದರೆ ತಮಗೆ ಮೋಕ್ಷ ಸಿಕ್ಕುತ್ತದೆಂದು ಅವರು ನಂಬುತ್ತಾರೆ
ಆದರೆ ನಾವಾದರೋ ಕೃಪೆಯಿಂದ ನಂಬಿಕೆಯ ಮೂಲಕ ರಕ್ಷಣೆಯೆಂದು ನಂಬುತ್ತೇವೆ. ಅವರು ಪರಲೋಕ ಮತ್ತು ನರಕ
ತಾತ್ಕಾಲಿಕ ಸ್ಥಿತಿಗಳೆಂದು ನಂಬುತ್ತಾರೆ, ಆದರೆ ನಾವು ಪರಲೋಕ ಮತ್ತು ನರಕ ನಿತ್ಯವಾದವುಗಳೆಂದು ನಂಬುತ್ತೇವೆ.ಮತ್ತು ನೀವು ಒಮ್ಮೆ ರಕ್ಷಿಸಲ್ಪಟ್ಟರೆ, ನೀವು ಸದಾಕಾಲವೂ ರಕ್ಷಿಸಲ್ಪಟ್ಟವರು
ಮತ್ತು ಯೇಸು ಇಲ್ಲದೆ ನೀವು ಒಮ್ಮೆ ಸತ್ತು ನರಕದ ಅಗ್ನಿಯನ್ನು ಸೇರಿ ಬಿಟ್ಟರೆ
ಅದರರ್ಥ ನೀವು ನಿತ್ಯನಿತ್ಯಕ್ಕೂ ಯಾತನೆ ಮತ್ತು ನಾಶಗೊಳ್ಳುವಿರಿ.
ಆದ್ದರಿಂದ ಹಿಂದುತ್ವವು ಸ್ಪಷ್ಟವಾಗಿ ಒಂದು ಸುಳ್ಳು ಧರ್ಮವೆಂದು ನಮಗೆ ತಿಳಿಯುತ್ತದೆ, ಖಂಡಿತ ಬೈಬಲಿಗಿಂತ ವ್ಯತ್ಯಾಸವಾದದ್ದು,
ಸ್ಪಷ್ಟವಾಗಿ ಇದು ಸೈತಾನನ ಧರ್ಮ, ಬಹಳ ಕೆಟ್ಟದ್ದು- ಹಾಗಾದರೆ ಯಾವ ಮುಕ್ತಾಯಕ್ಕೆ ಬರಬಹುದು? ಸರಿ, ಮೊಟ್ಟಮೊದಲನೆಯದಾಗಿ,
ಈ ಸಂದೇಶವನ್ನು ಬೋಧಿಸಿದ ಉದ್ದೇಶವೆಂದರೆ ಜೋಯೆಲ್ ಒಸ್ಟಿನ್ ರೀತಿಯವರ ಸುಳ್ಳು ಬೋಧನೆಯಿಂದ ದೂರವಿರಲು, ಇತರ ಎಕ್ಯೂಮಿನಿಕಲ್
ಉಪದೇಸಕರು “ಹೇ, ನಮ್ಮೊಳಗೆ ಬಹಳಷ್ಟು ಹೊಂದಾಣಿಕೆಗಳಿರುತ್ತವೆ ಮತ್ತು ವಾಸ್ತವದಲ್ಲಿ ನಾವು ಒಂದೇ ದೇವರನ್ನು ಆರಾಧಿಸುತ್ತಿದ್ದೇವೆ ಯಾಕೆಂದರೆ
ನಾವು ಯಾವ ಹೆಸರನ್ನು ಉಪಯೋಗಿಸಿದರೂ ಪರ್ವಾಗಿಲ್ಲ” ಎನ್ನುತ್ತಾರೆ
ನೋಡ್ರಿ, ನಾವು ಈ ಕಡೇ ದಿನಗಳಲ್ಲಿ ಆ ಸುಳ್ಳು ಬೋಧನೆಯ ವಿರುದ್ಧ ನಿಲ್ಲಲಿಚ್ಚಿಸುತ್ತೇವೆ ಮತ್ತು
ಬೈಬಲಾಧಾರಿತ ಕ್ರೈಸ್ತತ್ವ ಹಾಗೂ ಸುಳ್ಳು ಧರ್ಮಗಳ ನಡುವಿನ ವ್ಯತ್ಯಾಸವನ್ನು ತೋರಿಸಲು ಇಚ್ಚಿಸುತ್ತೇವೆ ಮತ್ತು
ಸುಳ್ಳುಧರ್ಮದೊಂದಿಗೆ ಒಂದಾಗಲು ಬಯಸುವದಿಲ್ಲ. ಅದಕ್ಕೆ ಎಕ್ಯೂಮಿನಿಕಲ್(ಸರ್ವಧರ್ಮ ಏಕ) ಅನ್ನುತ್ತಾರೆ. ಎಕ್ಯೂಮಿನಿಕಲ್ ಅಂದರೆ
“ಸರ್ವ ಧರ್ಮಗಳನ್ನು ಒಂದುಗೂಡಿಸಿರಿ ಮತ್ತು ಎಲ್ಲಾ ಭಿನ್ನಾಭಿಪ್ರಾಯಗಳನ್ನು ತೊಲಗಿಸಿರಿ” ಎಂದಾಗಿದೆ. ಬೈಬಲ್ ನಮಗೆ
ಬೋಧಿಸುವದು ಇದನ್ನಲ್ಲ- ಕ್ರಿಸ್ತವಿರೋಧಿಯ ಆತ್ಮವೇ ಅದನ್ನು ಕಲಿಸುತ್ತದೆ. ನೀವು ಈ ಸಂದೇಶವನ್ನು ಆಲಿಸಿದ ಹಾಗೆ,
ನೀವು ಹೃದಯದಲ್ಲಿ ವೈರಾಗ್ಯಗೊಂದು ಹಿಂದುಗಳನ್ನು ಸುವಾರ್ತೆಯಿಂದ ಸಂಧಿಸುವಿರೆಂದು
ನಾನು ನಿರೀಕ್ಷಿಸುತ್ತೇನೆ ಯಾಕೆಂದರೆ ಅವರು ಕುರುಡರಾಗಿದ್ದಾರೆ. ಅವರು ಜನ್ಮದಿಂದಾಗಿ ಇದರಲ್ಲಿ ಸಿಲುಕಿದ್ದಾರೆ.
ಅವರಾಗಿಯೇ ಸೈತಾನನ್ನು ಪೂಜಿಸುವದನ್ನು ಆರಿಸಿಕೊಂಡವರಲ್ಲ. ಇಲ್ಲ, ಅವರು ಈ ಸುಳ್ಳುಧರ್ಮದಲ್ಲಿ ಹುಟ್ಟಿದ್ದಾರಷ್ಟೇ,
ಅವರಿಗೆ ಬಾಲ್ಯದಿಂದಲೂ ಈ ಸುಳ್ಳನ್ನು ಬೋಧಿಸಲಾಗುತ್ತದೆ. ಅವರು ಮಂಕುಗೊಳಿಸಲ್ಪಟ್ಟಿದ್ದಾರೆ, ವಂಚಿಸಲ್ಪಟ್ಟಿದ್ದಾರೆ.
ಜೋಯಲ್ ಒಸ್ಟಿನ್ ಹೇಳುತ್ತಾನೆ, “ ಹೇ, ಅವರು ನಿಜವಾಗಿಯೂ ಬಹಳ ಸಭ್ಯರು, ಒಳ್ಳೇ ಜನರು”. ಅವರು ಒಳ್ಳೇವರೇ, ನನಗೆ ಗೊತ್ತು, ಖಂಡಿತವಾಗಿಯೂ ಅವರು
ಬಹಳ ಸಮಾಧಾನ ಪ್ರಿಯರು, ಸಭ್ಯ, ಒಳ್ಳೆವರೆಂದು ಗೊತ್ತು- ಆದರೆ ನರಕಕ್ಕೆ ದಾರಿಯನ್ನು ಒಳ್ಳೇ ಇಂಗಿತಗಳಿಗಾಗಿಯೇ
ನಿರ್ಮಿಸಲಾಗಿದೆ ಮತ್ತು ಯಾರಾದರೂ ಅವರಿಗೆ ಸುವಾರ್ತೆಯನ್ನು ಕೊಂಡೊಯ್ಯಬೇಕಿದೆ ಮತ್ತು ಯೇಸು ಕ್ರಿಸ್ತನ ಮಹಿಮೆಕರ ಸುವಾರ್ತೆಯ ಬೆಳಕನ್ನು
ಅವರು ರಕ್ಷಣೆ ಹೊಂದುವಂತಾಗಲು ಪ್ರಕಾಶಿಸಗೊಳಿಸಬೇಕಿದೆ. ಆದರೆ ನಮ್ಮ ಸುವಾರ್ತೆಯು ಬಚ್ಚಿಡಲ್ಪಟ್ಟರೆ, ಅದು
ಇಹಲೋಕದ ದೇವರಾದ ಸೈತಾನನು ನಂಬಿಕೆಯಿಲ್ಲದ ಮನಸ್ಸುಗಳನ್ನು ಮಂಕುಮಾಡಿರುವ ಜನರಿಗೆ ಮಾತ್ರವೇ ಮರೆಯಾಗಿರುತ್ತದೆ
ಮತ್ತು ನೀವು ಹೇಳಬಹುದು, “ ಸರಿ ಹಾಗಾದರೆ, ನಾನು ಭಾರತಕ್ಕೆ ಪ್ರಯಾಣ ಮಾಡಬೇಕೋ? ನನಗೆ ಅದು ಅಷ್ಟು
ಸೂಕ್ತವೇನಿಸುವದಿಲ್ಲ” ಎನ್ನಬಹುದು. ಆದರೆ ವಿಷಯ ಇಲ್ಲಿದೆ: ನೀವು ಭಾರತಕ್ಕೆ ಪ್ರಯಾಣವನ್ನು ಮಾಡಬೇಕಿಲ್ಲ,
ನೀವು ಎ.ಎಸ್.ಯು, ಅಥವಾ ಸೌತ್ ಟೆಂಪೆಗೆ ಪ್ರಯಾಣ ಮಾಡಬೇಕಿದೆ.
ನನ್ನನ್ನು ಆಲಿಸಿರಿ. ನಾನು ಆತ್ಮಗಳನ್ನು ಗೆಲ್ಲಲು ಸೌತ್ ಟೆಂಪೆಗೆ ಹೋದಾಗ ಉತ್ತಮ ನೆರೆಹೊರೆಗಳಲ್ಲಿ ಕನಿಷ್ಠ ಒಬ್ಬ ಹಿಂದುವಿನ ಬಾಗಲನ್ನು ಬಡಿಯದೆ ಇರಲಿಲ್ಲ.
ಎಂದಿಗೂ ಇಲ್ಲ. ಜನರು ಸುವಾರ್ತೆಸೇವೆಗಳ ಬಗ್ಗೆ ಮತ್ತು ಪ್ರಯಾಣಗಳ ಬಗ್ಗೆ ಬಹಳ ಮಾತಾಡಲಿಚ್ಚಿಸುತ್ತಾರೆ
ನಾನು ಸುವಾರ್ತೆಗಾಗಿ ಬೇರೆ ದೇಶಗಳನ್ನು ಭೇಟಿಕೊಡುವದರ ವಿರುದ್ಧವಲ್ಲ- ಆದರೆ ನಿಮಗೆ ಗೊತ್ತಾ? ಆ ಸೇವಾಕ್ಷೇತ್ರ ಇಲ್ಲಿಯೇ ಇದೆ!
ನಿಮ್ಮ ವಿಮಾನ ವೆಚ್ಚ ಮತ್ತು ಹಣವನ್ನು ಉಳಿಸಿರಿ. ಒಂದು ಪರದೇಶಕ್ಕೆ ಹೋಗಿ ಮಿಶನರಿಯಾಗಿರುವದು ದೊಡ್ಡ ವಿಷಯ.
ಆದರೆ ನೀವು ಮಿಶನರಿಯಾಗಿರುವದಕ್ಕೆ ಪರದೇಶಕ್ಕೆ ಹೋಗಬೇಕಾದದ್ದಿಲ್ಲ. ಯಾಕೆಂದರೆ ನಿಮಗೆ ಗೊತ್ತಾ?
ನೀವು ಭಾರತೀಯರನ್ನು ಸುವಾರ್ತೆಯಿಂದ ಸಂಧಿಸಲಿಚ್ಛಿಸಿದರೆ, ನೀವು ಹಿಂದುಗಳನ್ನು ಯೇಸುವಿನ ಸುವಾರ್ತೆಯಿಂದ ತಲುಪಲಿಚ್ಛಿಸಿದರೆ
ನೀವು ಮಾಡಬೇಕಾದದ್ದಿಷ್ಟೇ, ಸೌತ್ ಟೆಂಪೆಗೆ ಹೋಗಿ ಜನರ ಬಾಗಿಲುಗಳನ್ನು ಬಡಿಯುವದು.
ಅಥವಾ ನೀವು ಬಹುಶಃ ಉತ್ತಮ ಆಂಗ್ಲ ಮಾತಾಡಬಲ್ಲ ಮತ್ತು ಆಸಕ್ತಿಯಿಂದ ಕಿವಿಗೊಡುವ ಹಿಂದುಗಳ ಜೊತೆ ಮಾತಾಡಲಿಚ್ಛಿಸಿದರೆ
ನೀವು ASU ಕ್ಯಾಂಪಸ್ಸಿಗೆ ಹೋಗಬಹುದು. ನಾನು ಆತ್ಮಗಳನ್ನು ಗೆಲ್ಲುವದಕ್ಕಾಗಿ ASU ಹೋದಾಗಲೆಲ್ಲಾ
ಕನಿಷ್ಠ ಒಬ್ಬ ಭಾರತೀಯನ ಮನೆಯ ಬಾಗಿಲನ್ನಾದರೂ ತಟ್ಟಿರುತ್ತೇನೆ. ಹೌದು. ಅವರು ಅಲ್ಲಿದ್ದಾರೆ
ಅವರು ವಿಧ್ಯಾರ್ಥಿಗಳಾಗಿದ್ದಾರೆ, ಮತ್ತು ಅವರೆಲ್ಲಾ ಇಂಜಿನೀಯರಿಂಗ್ ಓದುತ್ತಿದ್ದಾರೆ. ಎಲ್ಲರೂ ಸಹ ಅದನ್ನೆ ಓದುತ್ತಿದ್ದಾರೆ.
ನೀವು ಯಾವಾಗಲೂ ಅವರಿಗೆ ಕೇಳಿರಿ, “ ಓ, ನೀವು ಏನು ಓದುತ್ತಿರುವಿರಿ?” ಇಂಜೀನಿರಿಂಗ್. ಆದರೆ ನಾನು ನಿಮಗೆ ಹೇಳುತ್ತೇನೆ,
ನೀವು ಚೀನಿಯರನ್ನು ಸಂಧಿಸಬಹುದು. ನೀವು ಭಾರತೀಯರನ್ನು ಸಂಧಿಸಬಹುದು. ಅಲ್ಲಿ ನಿಮಗೆ ASU ನಲ್ಲಿ ಲಕ್ಷಾಂತರ ವಿಧ್ಯಾರ್ಥಿಗಳು ಸಿಗುತ್ತಾರೆ
ಮತ್ತು ನೀವು ಬಾಗಲುಗಳನ್ನು ತಟ್ಟುವದಾದರೆ, ನೀವು ಆತ್ಮಗಳನ್ನು ಗೆಲ್ಲಲು ಹೋಗುವಾಗ ಅವರಿಗೆ ಸುವಾರ್ತೆಯನ್ನು ಕೊಡಬಹುದು.
ಮತ್ತು ಇಲ್ಲಿರುವವರ ಕುರಿತ ಬಹಳ ಉತ್ತಮ ಸಂಗತಿಯೇನೆಂದರೆ ಅವರಲ್ಲಿ ಬಹುಜನ ಆಂಗ್ಲ ಮಾತಾಡುತ್ತಾರೆ
ಅಲ್ಲದೆ, ಭಾರತದಲ್ಲಿ ಸಹ ಬಹಳಷ್ಟು ಜನರು ಈಗ ಆಂಗ್ಲ ಮಾತಾಡುತ್ತಾರೆ, ಆಂಗ್ಲ ಈಗ ಭಾರತದಲ್ಲಿ
ಪ್ರಮುಖ ಭಾಷೆಯಾಗಿರುತ್ತದೆ, ಮತ್ತು ಈಗ ಅಲ್ಲಿ ಈ ಜನರ ಜೊತೆ ಮಾತಾಡಲು ಭಾಷೆಯ ಅಡೆತಡೆಯೆಂಬುದು
ಇಲ್ಲವೇ ಇಲ್ಲ. ಈ ಜನರನ್ನು ಸುವಾರ್ತೆಯಿಂದ ಸಂಧಿಸಬಹುದಾಗಿದೆ, ಮತ್ತು ಅನೇಕ ವೇಳೆ
ಅವರು ಸುವಾರ್ತೆಯನ್ನು ಆಲಿಸುತ್ತಾರೆ. ಆದರೆ ಯಾರು ಹೋಗಿ ಆ ಬಾಗಲುಗಳನ್ನು ಬಡಿಯಲಿದ್ದಾರೆ ಮತ್ತು
ಎಲ್ಲಾ ಜೀವಿಗಳಿಗೆ ಸುವಾರ್ತೆಯನ್ನು ಸಾರುವರು? ಗಮನಿಸಿರಿ, ಸುವಾರ್ತೆಯಿಂದ ಸಂಧಿಸುವ ದಾರಿಯೆಂದರೆ
ಕೇವಲ ನಮ್ಮ ಬಾಯನ್ನು ತೆರೆದು ದೇವರ ವಾಕ್ಯವನ್ನನು ಧೈರ್ಯದಿಂದ ಸಾರುವದಷ್ಟೆ. ನೀವು ಹೇಳಬಹುದು, “ ಅದು ಸರಿ,
ನನಗೆ ಹಿಂದುಗಳಿಗೆ ವಿಶೇಷವಾಗಿ ಸುವಾರ್ತೆ ಸಾರುವ ವಿಧ ಗೊತ್ತಿಲ್ಲವಲ್ಲಾ.” ನೋಡ್ರಿ, ನಿಮಗೆ ಪ್ರತಿಯೊಂದು ಧರ್ಮದವರಿಗೆ ಸಾರುವದಕ್ಕೆ
ನಿಮಗೆ ವಿಶೇಷ ಸುವಾರ್ತೆಯ ವಿಧಾನದ ಅಗತ್ಯವಿಲ್ಲ. ಒಂದೇ ಸುವಾರ್ತೆ ಎಲ್ಲರನ್ನೂ ರಕ್ಷಿಸುವದಾಗಿದೆ. ನೀವು ಅದನ್ನು ಕಲಿತುಕೊಂಡು
ಅವರು ಪಾಪಿಗಳಾಗಿದ್ದಾರೆಂಬದನ್ನು ಮನದಟ್ಟುಮಾಡಬೇಕು, ಅವರಿಗೆ ನರಕ ಕುರಿತು ತಿಳಿಸಿರಿ, ಮತ್ತು ಅವರಿಗೆ ಕ್ರಿಸ್ತನ
ಜೀವನ, ಮರಣ, ಮತ್ತು ಪುನರುತ್ಥಾನಗಳ ಬಗ್ಗೆ ತಿಳಿಸಿರಿ. ಅದು ಉಚಿತ ವರ ಎಂದು ತಿಳಿಸಿರ, ಅದು ಅವರಿಗೆ
ನಂಬಿಕೆಯಿಂದ ಸಿಕ್ಕುತ್ತದೆಂದು ಕಲಿಸಿರಿ. ಬಹುಶಃ ನೀವು ಈ ಸಂದೇಶದಲ್ಲಿ ಕಲಿತ ಕೆಲವು ಸಂಗತಿಗಳನ್ನು
ನೀವು ನಿಮ್ಮ ಸುವಾರ್ತೆ ಸಾರುವಾಗ ಅಂತ್ಯದಲ್ಲಿ ಅವರಿಗೆ ತೋರ್ಪಡಿಸಬಹುದು.
ನಾನು ಯಾವಾಗಲೂ ಪ್ರತಿಯೊಬ್ಬರಿಗೆ ಸಹ ಏಕರೀತಿಯಲ್ಲಿಯೆ ಸುವಾರ್ತೆ ಆರಂಭಿಸುತ್ತೇನೆ. ಎಲ್ಲವನ್ನೂ ಗೊಂದಲಗೊಳಿಸುವ ಬದಲಾಗಿ
ನೀವು ಯಾಕೆ ಸುವಾರ್ತೆಯನ್ನಷ್ಟೆ ಕೊಡಬಾರದು ಯಾಕೆಂದರೆ ಅದು ನಂಬಿಕೆಯಿಡುವವರಿಗೆಲ್ಲಾ ರಕ್ಷಣೆ ಉಂಟುಮಾಡುವ
ಶಕ್ತಿಯಾಗಿದೆ, ಯೆಹೂದ್ಯರು ಮೊದಲು, ನಂತರ ಗ್ರೀಕರಿಗೆ ಮತ್ತು ಹಿಂದುಗಳಿಗೆ ಸಹ ಆಗಿದೆ.
ಕ್ರಿಸ್ತನ ಮರಣ, ಹೂಣಲ್ಪಡುವಿಕೆ ಮತ್ತು ಪುನರುತ್ಥಾನದ ಸುವಾರ್ತೆಯು ದೇವರ ಶಕ್ತಿಯಾಗಿದೆ
ನೀವು ಅದನ್ನು ಯಾರಿಗೆ ಸಾರಿದರೂ ಸರಿಯೇ.
ಆದ್ದರಿಂದ ನೀವು ಹಿಂದುಗಳಿಗೆಂದೇ ವಿನ್ಯಾಸಿಸಿದ ರಕ್ಷಣಾಸಂಕಲ್ಪವೊಂದನ್ನು ಹೊತ್ತು ಅವರ ಮುಂದೆ ನಿಲ್ಲುವ ಅಗತ್ಯವಿಲ್ಲ. ಬೇಕಾಗಿಲ್ಲ,
ನೀವು ಅವರ ಮುಂದೆ ಹೋಗಿ ರಕ್ಷಣಾಸಂಕಲ್ಪವನ್ನು ತಿಳಿಸಿರಿ. ಆದರೆ ರಕ್ಷಣಾ ಸಂಕಲ್ಪವನ್ನಿ ಸಾರಿದ ಮೇಲೆ ಕೊನೆಯಲ್ಲಿ
ಇಡೀ ಸುವಾರ್ತೆಯನ್ನು ಸಾರಿ ಸರಳವಾಗಿ ತಿಳಿಸಿದ ಮೇಲೆ, ನಂತರ ಕೊನೆಯಲ್ಲಿ, ಬಹುಶಃ ನೀವು
ಅವರ ನಂಬಿಕೆಯಲ್ಲಾ ಯೇಸುವಿನ ಮೇಲೆಯೇಇರತಕ್ಕದ್ದೆಂದು ಒತ್ತಿಹೇಳಿರಿ. ನೀವು ಇದುವರೆಗೂ ಪೂಜಿಸುತ್ತಿರುವ
ಅವರ ನಂಬಿಕೆಯಲ್ಲಾ ಯೇಸುವಿನ ಮೇಲೆಯೇಇರತಕ್ಕದ್ದೆಂದು ಒತ್ತಿಹೇಳಿರಿ. ನೀವು ಇದುವರೆಗೂ ಪೂಜಿಸುತ್ತಿರುವ
ಬೇರೆ ಜಾತಿ ಪಂಗಡಗಳ ಹಿನ್ನಲೆಯಿಂದ ಬರುವರಿಗಿಂತಲೂ ಹಿಂದುಗಳ ಹತ್ತಿರ ಮಾತ್ರ ನೀವು ಆ ಸತ್ಯವನ್ನು
ಒತ್ತಿಹೇಳಬೇಕಾದ ಸಂಗತಿಯಾಗಿರುತ್ತದೆ. ನೀವು ಅದರ ಕುರಿತು ಕೊನೆಯಲ್ಲಿ ಹೆಚ್ಚು ಒತ್ತಿಹೇಳುವ ಅಗತ್ಯವಿರುತ್ತದೆ
ಆದರೆ ನೀವು ಬಿಳಿಯ ಜನರಿಗೆ ಸಹ ಸುವಾರ್ತೆಯನ್ನು ಹಂಚಬಹುದು, ನೀವು ಕರಿಯರಿಗೆ ಸುವಾರ್ತೆಯನ್ನು ಹಂಚಿಕೊಳ್ಳಬಹುದು,
ನೀವು ಹೀಸ್ಪೆನಿಯನ್ ಜನರಿಗೆ ಸುವಾರ್ತೆಯನ್ನು ಸಾರಬಹುದು, ನೀವು ಯಾವದೇ ದೇಶದಜನರಿಗೆ ಸುವಾರ್ತೆ ಹಂಚಿಕೊಳ್ಳಬಹುದು
ನೀವು ಅದನ್ನು ಒಬ್ಬರಿಗೆ ಸಾರುವದಕ್ಕೆ ಶಕ್ತರಾದರೆ, ನೀವು ಇತರರಿಗೂ ಹಂಚಿಕೊಳ್ಳಬಲ್ಲಿರಿ ಯಾಕೆಂದರೆ
ಎಲ್ಲರ ಮೇಲೆಯೂ ಒಬ್ಬನೇ ದೇವರಾಗಿದ್ದಾನೆ, ಆತನು ತನ್ನ ಹೆಸರು ಹೇಳಿಕೊಳ್ಳುವವರಿಗೆಲ್ಲಾ ಐಶ್ವರ್ಯವಂತನಾಗಿದ್ದಾನೆ. ಒಂದೇ ಮಂದೆ ಇರುತ್ತದೆ.
ಒಬ್ಬನೇ ಕುರುಬನಿರುತ್ತಾನೆ. ಒಬ್ಬನೇ ಕರ್ತನಿದ್ದಾನೆ, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ, ಒಬ್ಬನೇ ದೇವರು, ಅದ್ದರಿಂದ ನಾವು
ಹಿಂದುಗಳಿಗೆ ಸುವಾರ್ತೆಯನ್ನು ಸಾರಬೇಕಿದೆ. ನೀವು ಭಾರತಕ್ಕೆಪ್ರಯಾಣಿಸಬೇಕಿಲ್ಲ, ಒಂದು ವೇಳೆ ನೀವು
ಅಲ್ಲಿಗೆ ಹೋಗುವದಾದರೆ ಬಹಳ ಒಳ್ಳೇ ವಿಚಾರ, ಆದರೆ,ಪ್ರಾಮಾಣಿಕವಾಗಿ ಹೇಳುತ್ತೇನೆ, ಇಲ್ಲಿಯೇ ಅವಕಾಶವಿದೆ. ನಾನು ನಿಮಗೆ ಪೋಯಿನಿಕ್ಷಗೆ ಹೋಗೆಂದು
ಅಥವಾ ಸ್ಕಾಟಡೆಲಗೆ, ಅಥವಾ ಮೆಸಾಗೆ ಹೋಗೆಂದು ಹೇಳುತ್ತಿಲ್ಲ- ಇಲ್ಲಿಯೇ ಇದ್ದಾರೆ, ಟೆಂಪೆಯಲ್ಲೇ ಇದ್ದಾರೆ, ಅದು ನಿಮ್ಮ ನಗರದಲ್ಲೇ. ಇಲ್ಲಿಯೇ.
ಸಾವಿರಾರು ಸಾವಿರಾರು ಮತ್ತು ಸಾವಿರಾರು ಹಿಂದುಗಳು ಸುವಾರ್ತೆಗಾಗಿ ಬೆಳೆಯನ್ನು ಕೊಯ್ಯಲು ಪಕ್ವವಾಗಿದ್ದಾರೆ.
ಆದ್ದರಿಂದಲೇ ನನಗೆ ಮನೆ ಮನೆಗೆ ಹೋಗಲು ಇಷ್ಟವಾಗುತ್ತದೆ. ಯಾಕೆಂದರೆ ನಿಜವಾಗ್ಲೂ, ಇದರಿಂದ ಎಲ್ಲಾ ಜನರನ್ನು ಸಂಧಿಸಲು ಸಾಧ್ಯವಾಗುತ್ತದೆ
ಇದು ನಿಮಗೆ ಸ್ಥಳೀಯ ಮತ್ತು ವಿದೇಶ, ಆಲ್-ಇನ್-ಒನ್ ಮಿಶನರಿಯಾಗಿರುವಂತೆ ಮಾಡುತ್ತದೆ, ಕೇವಲ ನೀವು ಹೊರಗೆ ಹೋಗಿ
ಮನೆಮನೆ ಬಾಗಲು ತಟ್ಟಬೇಕು. ಆದರೆ ನಾನು ಈ ಅಂಶದ ಮೇಲೆ ಗಮನಹರಿಸಲಿಚ್ಚಿಸುತ್ತೇನೆ. ಹಿಂದುಗಳು ರಕ್ಷಣೆ ಹೊಂದುವದಕ್ಕಿರುವ
ದೊಡ್ಡ ಅಡ್ಡಿಯೆಂದರೆ( ಇದು ಹಿಂದುಗಳಿಗೂ ಎಲ್ಲಾ ದೇಶಗಳಿಗೂ ಸೇರಿದಂತೆ ಅನ್ವಯಿಸುತ್ತದೆ),
ಅಮೆರಿಕದವರಾದ ನಾವು ಭಕ್ತಿಹೀನರೂ ಕೆಟ್ಟವರೂ ನಮ್ಮ ಜೀವನ ವಿಧಾನದಲ್ಲಿ ಪ್ರಾಪಂಚಿಕರಾಗಿಯೂ ಇರುವ
ಮೂಲಕ ನಮ್ಮ ಸಾಕ್ಷಿಯನ್ನು ಕೇಡಿಸಿಕೊಂಡು ಬಿಟ್ಟಿರುತ್ತೇವೆ, ಅದೊಂದು ದೊಡ್ಡ ತಡೆಯಾಗಿರುತ್ತದೆ,
ಮತ್ತು ಇದರಿಂದ ಹಿಂದುಗಳು, ಮುಸ್ಲಿಮರು ಅಥವಾ ಇತರ ಜನರು ಸುವಾರ್ತೆಯನ್ನು ಸ್ವೀಕರಿಸದಿರುವದಕ್ಕೆ ಕಾರಣವಾಗಿರಬಲ್ಲದು
ಇದಕ್ಕೆ ಕಾರಣ ಅಮೆರಿಕದ ಕ್ರೈಸ್ತರಾದ ನಾವು ನಮ್ಮ ಸಾಕ್ಷಿಯನ್ನು ಕೇಡಿಸಿಕೊಳ್ಳುತ್ತಿದ್ದೇವೆ.
ಧರ್ಮೋಪದೇಶಕಾಂಡ ನೇ ಅಧ್ಯಾಯದಲ್ಲಿ ಏನು ಹೇಳುತ್ತದೆ ನೋಡಿರಿ. ಇದು ವಿದೇಶಿಯರಿಗೆ ಸುವಾರ್ತೆಸಾರುವದರ ಕುರಿತಾಗಿರುತ್ತದೆ.
ಧರ್ಮೋಪದೇಶಕಾಂ : ನೋಡಿರಿ. ಹೀಗೆ ಹೇಳುತ್ತದೆ, “ಇಗೋ, ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು
ಮಾಡಬೇಕೆಂದು ನನ್ನ ದೇವರಾದ ಕರ್ತನು ನನಗೆ ಆಜ್ಞಾಪಿಸಿದಂತೆ ನಿಯಮಗಳನ್ನೂ ನ್ಯಾಯಗಳನ್ನೂ ನಿಮಗೆ ಬೋಧಿಸಿದ್ದೇನೆ.
ಹೀಗಿರುವ ದರಿಂದ ನೀವು ಅವುಗಳನ್ನು ಕೈಕೊಂಡು ಅನುಸರಿಸಿರಿ;” ಇದನ್ನು ಗಮನಿಸಿರಿ, “ ಯಾಕಂದರೆ
ಜನಾಂಗಗಳ ಮುಂದೆ ಇರುವ ನಿಮ್ಮ ಜ್ಞಾನವೂ ನಿಮ್ಮ ವಿವೇಕವೂ ಇದೇ ಆಗಿದೆ.” ಆತನು ಏನು ಹೇಳುತ್ತಿದ್ದಾನೆ? ಬೇರೆ ದೇಶಗಳು
ದೇವರವಾಕ್ಯವನ್ನು ಕೈಗೊಳ್ಳುವ ಮತ್ತು ದೇವರ ಆಜ್ಞಾವಿಧಿಗಳನ್ನು ಪಾಲಿಸುವದನ್ನು ನೋಡುವಾಗ
ಅವರ ದೃಷ್ಟಿಯಲ್ಲಿ ನೀವು ಜ್ಞಾನಿಗಳೂ ವಿವೇಕಿಗಳೂ ಆಗಿ ತೋರುವಿರಿ. ಅವರು ಅದನ್ನು ನೋಡುವರು
ಮತ್ತು ಅದು ಅವರ ಮೇಲೆ ಪ್ರಭಾವಬೀರುತ್ತದೆ. ಅದು ಅವರಿಗೆ ತಿಳುವಳಿಕೆ ನೀಡುತ್ತದೆ ಮತ್ತು ಅದರಿಂದ
ಅವರು ಗೌರವತೋರುವರು. ಆತನು ನೇ ವಚನದಲ್ಲಿ ಹೀಗೆ ಹೇಳುತ್ತಾನೆ, “ ನಿಶ್ಚಯವಾಗಿ ಈ ದೊಡ್ಡ ಜನಾಂಗವು ಜ್ಞಾನವೂ
ವಿವೇಕವೂ ಉಳ್ಳ ಜನವಾಗಿದೆ ಅನ್ನುವರು. ನಾವು ಆತನಿಗೆ ಮೊರೆ ಯಿಡುವ ಎಲ್ಲಾ ವಿಷಯಗಳಲ್ಲಿ ನಮ್ಮ
ದೇವರಾದ ಕರ್ತನು ನಮಗೆ ಸಮೀಪವಿರುವ ಪ್ರಕಾರ ಬೇರೆ ಸಮೀಪವಾದ ದೇವರುಳ್ಳ ದೊಡ್ಡ ಜನಾಂಗ ಯಾವದು? ಇದಲ್ಲದೆ ನಾನು ಈಹೊತ್ತು
ನಿಮ್ಮ ಮುಂದೆ ಇಡುವ ಈ ಎಲ್ಲಾ ನ್ಯಾಯಪ್ರಮಾಣದ ಪ್ರಕಾರ ನೀತಿಯುಳ್ಳ ನಿಯಮ ನ್ಯಾಯಗಳುಳ್ಳ ದೊಡ್ಡ ಜನಾಂಗ ಯಾವದು?
ಈಗ, ನನ್ನ ಪ್ರಶ್ನೆ ಹೀಗಿದೆ: ನಿಮಗನ್ನಿಸುತ್ತದಾ, ಭಾರತದಲ್ಲಿರುವ ಒಬ್ಬರು
ಹಾಲಿವುಡ್ ಸಿನಿಮಾ ನೋಡಿ, “ ವಾವ್ಹ್, ಅಮೆರಿಕದಷ್ಟು ಅಷ್ಟೊಂದು ನೀತಿಯುಳ್ಳದ್ದು ದೇಶ ಯಾವದಿದೆ?” ಎಂದು ಹೇಳುತ್ತಾರೆಯೇ.
“ ವಾವ್ಹ್, ಅವರಷ್ಟು ದೇವರಿಗೆ ಹೆಚ್ಚು ಪ್ರಾಮುಖ್ಯ ಕೊಡುವ ದೇಶ ಯಾವದಿರುತ್ತದೆ? ನೀತಿಯ ಕಾನೂನುಗಳು ಮತ್ತು
ವಿಧಿಗಳನ್ನು ಹೊಂದಿರುವ ಅವರ ದೇಶದಂತೆ ಬೇರೆ ಯಾವದಿರುತ್ತದೆ? ಅನ್ನುತ್ತಾರೋ. ಇಲ್ಲ, ಅದನ್ನು ನೋಡಿ
ಕಸವೆಂದೆಣಿಸುತ್ತಾರೆ, ಮತ್ತು ಅವರು ನಮ್ಮ ಸಂಸ್ಕೃತಿ ಬಗ್ಗೆ ಏನಂದುಕೊಳ್ಳುತ್ತಾರೆ ಗೊತ್ತಾ? ಕಸ.
ನಮ್ಮ ಧರ್ಮದ ಬಗ್ಗೆ ಏನಂದುಕೊಳ್ಳುತ್ತಾರೆ ಗೊತ್ತಾ? ಅದು ಕಸ ಅಂದುಕೊಳ್ಳುತ್ತಾರೆ.ಈಗ ಗಮನಿಸಿ:
ಇದು ಅಮೆರಿಕಕ್ಕೆ ಕಥೆಯಷ್ಟೇ, ನಾವು ಅಸಹಾಯಕರು ಯಾಕೆಂದರೆ ನಾವು ನಮ್ಮ ಸರ್ಕಾರದ ಮೂರ್ಕತ್ವವನ್ನು ಹತೋಟಿಮಾಡಲಾಗದು, ಅಥವಾ
ಹಾಲಿವುಡ್ ನ ಹುಂಬತನವನ್ನು ಹತೋಟಿಮಾಡಲಾಗದು, ಅಥವಾ ಮೆಡಿಸನ್ ಆವಿನ್ಯೂದ ಹುಂಬತನನ್ನು ಹತೋಟಿಮಾಡಲಾಗದು. ನಮಗೆ ಅದರಲ್ಲಿ ಹತೋಟಿಯಿಲ್ಲ.
ಆದರೆ ನಾವು ಕನಿಷ್ಠ ನಮ್ಮ ಮೇಲೆ ಹತೋಟಿಯಿಡಬಹುದು, ಮತ್ತು ನಮ್ಮ ಕುಟುಂಬಗಳ ಮೇಲೆ ಮತ್ತು ನಮ್ಮ ಸಭೆಗಳ ಮೇಲೆ ಹತೋಟಿಯಿಡಬಹುದು.
ಕನಿಷ್ಠ ನಾವು ದೇವರ ಮತ್ತು ರಕ್ಷಣೆಯ ಸತ್ಯವನ್ನು ಬೋಧಿಸುವದು ಮಾತ್ರವಲ್ಲ ಆದರೆ ಜನರು ಗೌರವಿಸುವಂಥ
ಜೀವಿತವನ್ನು ನಡಿಸುವ ಪ್ರಕಾಶಿಸುವಂಥ ಸುವಾರ್ತೆಯ ಬೆಳಕಾಗಿರೋಣ, ಆಗ ಅವರು
ನಾವು ದೇವರ ಕುರಿತು ಹೇಳಬಯಸುವದನ್ನು ಅಲಿಸುವದಕ್ಕೆ ಆಸಕ್ತಿ ತೋರುವರು. ನೀವು ಒಂದು ಕೆಟ್ಟದಾದ, ಪ್ರಾಪಂಚಿಕ ರೀತಿಯ ಜೀವಿತವನ್ನು
ಜೀವಿಸುವಾಗ ಯಾರಾದರೂ ಏಕೆ ನಿಮ್ಮ ದೇವರ ಕುರಿತಾದ ಮಾಗುಗಳಿಗೆ ಕಿವಿಗೊಡುವದಕ್ಕೆ ಬಯಸುತ್ತಾರೆ?
ಬಹುಶಃ ಅವರು ತಮ್ಮಲ್ಲಿ ಅಂದುಕೊಳ್ಳುತ್ತಿರಬಹುದು, “ ಬಹುಶಃ ನಾವು ನಿಮಗಿಂತಲೂ ಹೆಚ್ಚು ನೈತಿಕವಾಗಿದ್ದೇವೆ.
ನಾವೇಕೆ ಕರ್ತನಾದ ಯೇಸು ಕ್ರಿಸ್ತನನ್ನು ಸ್ವೀಕರಿಸಿಕೊಳ್ಳಬೇಕು, ನಿಮ್ಮ ಹಾಗೆ ಜೀವಿಸುವದಕ್ಕೋ? ನಾವೇಕೆ
ಕರ್ತನಾದ ಯೇಸುಕ್ರಿಸ್ತನನ್ನು ಸ್ವೀಕರಿಸಬೇಕು, ನಮ್ಮ ಹೆಂಗಸರು ವೇಶ್ಯ, ಕಾಮಿಗಳಂತೆ ಮತ್ತು ಕಾಲಗರ್ಲ್ ರೀತಿ ಉಡುಪು ಧರಿಸಿಕೊಳ್ಳುವಂತಾಗುವದಕ್ಕೋ?
ಅವರು ಏಕೆ ಅದನ್ನು ಸ್ವೀಕರಿಸಿಕೊಳ್ಳುವರು? ಅವರು ಅದನ್ನು ನೋಡಿ ಅನೈತಿಕತೆ ಅನ್ನುತ್ತಾರೆ. ಅವರು ನಮ್ಮ ಸಂಸ್ಕೃತಿಯನ್ನು ನೋಡಿ
ಅದು ಭಕ್ತಿಹೀನವಾದ್ದು ಎನ್ನುತ್ತಾರೆ. “ನಿಮಗೆ ಯಾವದೇ ನೀತಿಗಳಾಗಲಿ, ಮಾನದಂಡಗಳಾಗಲು ಇಲ್ಲ, ನಿಮಗೆ ನ್ಯಾಯವಿಧಿಗಳಾಗಲಿ
ಜೀವನದ ಕಟ್ಟಳೆಗಳಾಗಲಿ ಯಾವವೂ ಇಲ್ಲ.” ಇಂದು ಅವರು ರಕ್ಷಣೆ ಹೊಂದದಂತೆ ಇದು ಅವರಿಗೆ ತಡೆಯಾಗಿ ಇರುತ್ತದೆ
ಯಾಕೆಂದರೆ ಅಮೆರಿಕನ್ನರು ಅಲ್ಲಿಗೆ ಹೋಗುತ್ತಾರೆ, ಕೆಟ್ಟದ್ದಾಗಿ ಜೀವಿಸುತ್ತಾರೆ.
ನಿಮಗೆ ಗೊತ್ತಾ, ನಾನು ರಿಚರ್ಡ್ ಗೇರ ಬಗ್ಗೆ ಆತನು ಅಲ್ಲಿ ಹೋಗಿದ್ದಾಗ ಬಂಧಿಸಲ್ಪಟ್ಟ ಕುರಿತು ಓದಿದ್ದೆನು, ಕಾರಣ
ಆತನು ತನ್ನ ಹೆಂಡತಿಯಲ್ಲದ ಸ್ತ್ರೀಯೊಬ್ಬಳಿಗೆ ಜನರ ಎದುರು ಮುದ್ದಿಟ್ಟಿದ್ದನು. ಆತನು ಎಲ್ಲಾ ಜನರ ಮುಂದೆ ಹೆಂಡತಿಯಲ್ಲದ
ಸ್ತ್ರೀಯೊಬ್ಬಳ ಬಾಯಿಗೆ ಚುಂಬಿಸಿದನು. ಇದನ್ನು ನಾವು ಅನೈತಿಕವೆಂದು ನೋಡಬೇಕು. ನೀವೆನಂದುಕೊಳ್ಳುವಿರಿ,
ಒಂದು ವೇಳೆ ಇಲ್ಲಿಗೆ ಒಬ್ಬ ಸ್ತ್ರೀ ಬಂದರೆ, ಹೆಂಡತಿಯಲ್ಲದ ಅವಳನ್ನು ನಾನು ಮುದ್ದಿಟ್ಟರೆ?
ನೀವು ಆಘಾತಗೊಳ್ಳುವಿರಿ, ನೀವು ಖಂಡಿತ ಆಘಾತಗೊಳ್ಳಬೇಕು, ಆದರೆ ನಾವು ಅದನ್ನು ಟಿವಿಯಲ್ಲಿ ನೋಡುತ್ತೇವೆ
ನಾವು ಅದನ್ನು ಸಿನಿಮಾಗಳಲ್ಲಿ ಕಾಣುತ್ತೇವೆ, ಆದರೆ ನಾವು ಅದರ ಬಗ್ಗೆ ಏನನ್ನೂ ಅಂದುಕೊಳ್ಳುವದಿಲ್ಲ. ಅದೆಲ್ಲಾ ಪರ್ವಾಗಿಲ್ಲ,
ಆತನು ಭಾರತದಲ್ಲಿ ಅದನ್ನು ಮಾಡಿ ಬಂಧನಕ್ಕೊಳಗಾದ. ಯಾಕೆ? ಯಾಕೆಂದರೆ ಅವರ ಸಂಸ್ಕೃತಿಯು ವಾಸ್ತವದಲ್ಲಿ
ಆ ರೀತಿ ನೋಡಿದರೆ ಹೆಚ್ಚು ಸಭ್ಯ ಮತ್ತು ಕೆಲವು ಸಂಗತಿಗಳಲ್ಲಿ ಹೆಚ್ಚು ನೈತಿಕತೆ ತೋರಿಸುತ್ತದೆ
ದೇವರೇ ನಮಗೆ ಸಹಾಯಮಾಡು, ಅಮೆರಿಕದ ಕ್ರೈಸ್ತರಾಗಿ ನಾವು ಯಾವ ನೈತಿಕತೆಗಳಿಲ್ಲದೆ, ವಿಧಿಗಳಿಲ್ಲದೆ ಜೀವಿಸಿ ಯೇಸು
ಕ್ರಿಸ್ತನ ಹೆಸರನ್ನು ಕೇಸರಿಗೆ ಎಳೆಯುವವರಾಗಿದ್ದೇವೆ- ಭಕ್ತಿಹೀನವಾದ, ಹೊಲಸಾದ ಮತ್ತು ಆಶುದ್ಧ ಜೀವನ ನಡಿಸುತ್ತಿದ್ದೇವೆ
ಲೋಕವು ನಮ್ಮನ್ನು ನೋಡುತ್ತದೆ, ಮತ್ತು ಅವರಿಗೆ ಖಂಡಿತ ಅಸಹ್ಯವೇನಿಸುತ್ತದೆ. ಅವರೇಕೆ ಇಷ್ಟಪಡಬೇಕು?
ನಾವು ನಿರ್ಮಲಜೀವನ ನಡಿಸದಿದ್ದರೆ ಹೇಹೆ ಹಿಂದುಗಳನ್ನು, ಮುಸ್ಲಿಮರನ್ನು ಹೇಗೆ ಸುವಾರ್ತೆಯಿಂದ ಸಂಧಿಸಲಿದ್ದೇವೆ?
ಅವರು ನಮ್ಮನ್ನು ನೋಡಿ,” ನಾನೇಕೆ ಈ ಧರ್ಮವನ್ನು ಅನುಸರಿಸಲು ಇಚ್ಚಿಸಬೇಕು?
ನನ್ನ ಹೆಂಡತಿ ನಿನ್ನವಳಿಗಿಂದ ಹೆಚ್ಚು ದೇಹವನ್ನು ಮುಚ್ಚಿಕೊಂಡಿದ್ದಾಳೆ. ನಿನ್ನ ಹೆಂಡತಿ ಅರೆ ನಗ್ನಳಾಗಿದ್ದಾಳೆ. ನಿನ್ನ ಹೆಂಡತಿ
ಚಿಕ್ಕ ಚಡ್ಡಿ ಮತ್ತು ಅರೆಬರೆ ಶರ್ಟ್ ಹಾಕಿದ್ದಾಳೆ”. ಸರಿ, ಮುಸ್ಲಿಮ ಹೆಂಗಸರು ಸ್ವಲ್ಪ ಜಾಸ್ತಿಯೇ ಉಡುಪು ಧರಿಸಿಕೊಳ್ಳುತ್ತಾರೆ ನಿಜ.
ಅದು ಸರಿ, ನಾವೆಲ್ಲಾ ಬಹಳ ಕಡಿಮೆ ಬಟ್ಟೆ ಧರಿಸುತ್ತಿದ್ದೇವೆ! ಮಿತ್ರರೇ, ನಾವು ಇವೆರಡರ ನಡುವೆ ಏನಾದರೂ ಸಮತೋಲನವಾದದ್ದನ್ನು ಕಂಡುಕೊಳ್ಳಬೇಕು!
ನಾವು ಉಡುಪಿನ ವಿಷಯದಲ್ಲಿ ಬೈಬಲಿನ ಮಾನದಂಡಗಳನ್ನು ಪಾಲಿಸಬೇಕಿರುತ್ತದೆ.
ಇತರ ದೇಶಗಳನ್ನು ಹೇಗೆ ಸುವಾರ್ತೆಯಿಂದ ಸಂಧಿಸಲಿದ್ದೇವೆಂಬ ಬಗ್ಗೆ ಧರ್ಮೋಪದೇಶಕಾಂಡ ರಲ್ಲಿ ಬೈಬಲ್ ಸ್ಪಷ್ಟವಾಗಿದೆ:
ದೇವರ ವಿಧಿಗಳನ್ನೂ ದೇವರ ನೀತಿಯನ್ನೂ ಅನುಸರಿಸುವ ಜನಾಂಗವೆಂಬ ಮಾದರಿಯನ್ನು ತೋರುವ ಮೂಲಕ.