'ಝಿಯೋನ್ ನತ್ತ ಪಯಣ' - ಕನ್ನಡ ಭಾಷೆಯಲ್ಲಿ ಚಲನಚಿತ್ರವನ್ನು (ಯೆಹೂದ್ಯರ ಇತಿಹಾಸ) ನು

Video

April 17, 2015

ಸುಮಾರು 4000 ವರ್ಷಗಳ ಹಿಂದೆ, ಮೆಸಪಟೋಮಿಯಾದಲ್ಲಿ ದೇವರು ಅಬ್ರಹಾಮನಿಗೆ ಪ್ರತ್ಯಕ್ಷರಾಗಿ, “ನಿನ್ನ ದೇಶವನ್ನು, ಬಂಧುಬಾಂಧವರನ್ನು ಮತ್ತು ನಿನ್ನ ತಂದೆಯ ಮನೆಯನ್ನು ತೊರೆದು ನಾನು ತೋರಿಸುವ ದೇಶಕ್ಕೆ ಹೊರಟುಹೋಗು. ನಾನು ನಿನ್ನಿಂದ ದೊಡ್ಡ ಜನಾಂಗವುಂಟಾಗುವಂತೆ ಮಾಡುವೆನು” ಎಂಬುದಾಗಿ ಹೇಳಿದರು. ಅಬ್ರಹಾಮನು ದೇವರಿಗೆ ವಿಧೇಯನಾಗಿ, ದೇವರು ತನಗೆ ವಾಗ್ದಾನ ಮಾಡಿದ ಕಾನಾನ್ ದೇಶಕ್ಕೆ ಬಂದು ತನ್ನ ಮಗನಾದ ಇಸಾಕ್ ಮತ್ತು ನಂತರದ ದಿನಗಳಲ್ಲಿ, ‘ಇಸ್ರಾಯೇಲ್’ ಎಂಬುದಾಗಿ ಹೆಸರು ಪಡೆದ ತನ್ನ ಮೊಮ್ಮಗನಾದ ಯಾಕೋಬನೊಂದಿಗೆ ಜೀವಿಸಿದನು.

ಕಾನಾನ್ ದೇಶದಲ್ಲಿ ಬರಗಾಲ ಕಂಡುಬಂದಾಗ ಇಸ್ರಾಯೇಲ್ ಹಾಗೂ ಅವನ 12 ಮಂದಿ ಗಂಡು ಮಕ್ಕಳು ಈಜಿಪ್ಟ್ ದೇಶಕ್ಕೆ ಬಂದು ನೆಲೆಸಿದರು, ಮತ್ತು ಅಲ್ಲಿ ಅವರು ದೊಡ್ಡ ಜನಾಂಗವಾಗಿ ಬೆಳೆದರು. ತಮ್ಮೊಡನೆ ವಾಸಿಸುತ್ತಿರುವ ಬಲಶಾಲಿಯಾದ ಇಸ್ರಾಯೇಲ್ ಜನಾಂಗವನ್ನು ನೋಡಿ ಈಜಿಪ್ಟಿಯನ್ನರು ಗಾಬರಿಗೊಂಡು ಅವರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು ಮತ್ತು ಅವರನ್ನು ಕಠಿಣ ಜೀತಕ್ಕೆ ಒಳಪಡಿಸಿ ಅವರ ಬದುಕನ್ನು ಅಸಹನೀಯಗೊಳಿಸಿದರು. 430 ವರ್ಷಗಳ ಕಾಲ ಈಜಿಪ್ಟ್ ನಲ್ಲಿ ಬದುಕು ಸವೆಸಿದ ಬಳಿಕ, E¸ÁæAiÉÄîgÀ£ÀÄß ಮೋಶೆ ಗುಲಾಮಗಿರಿಯಿಂದ ಬಿಡಿಸಿಕೊಂಡು ಕೆಂಪು ಸಮುದ್ರವನ್ನು ದಾಟಿ ಅರೇಬಿಯಾಕ್ಕೆ ಕೊಂಡೊಯ್ಯುತ್ತಾನೆ, ಅಲ್ಲಿ ಸೀನಾಯ್ ಪರ್ವತದಲ್ಲಿ ಅವರು ದೇವರ ಆಜ್ಞೆಗಳನ್ನು ಪಡೆದರು.

ಮೋಶೆಯೊಂದಿಗೆ ಈಜಿಪ್ಟ್ ದೇಶವನ್ನು ತೊರೆದ ಇಸ್ರಾಯೇಲ್ ಜನಾಂಗದವರು, ದೇವರಲ್ಲಿ ನಂಬಿಕೆ ಕಳೆದುಕೊಂಡಿದ್ದರಿಂದ ದೇವರು ವಾಗ್ದಾನ ಮಾಡಿದ ದೇಶಕ್ಕೆ ಹೋಗಲು ಅವರಿಗೆ ಅನುಮತಿ ನಿರಾಕರಿಸಲಾಯಿತು. ಅವರು 40 ವರ್ಷಗಳ ಕಾಲ ಮರುಭೂಮಿಯಲ್ಲಿ ಅಲೆಯಬೇಕಾಯಿತು, ದೇವರನ್ನು ನಂಬುವ ಹೊಸ ಜನಾಂಗವೊಂದು ಉದಯಿಸಿದ ಬಳಿಕ ಅವರು ಯೆಹೋಶುವನೊಂದಿಗೆ ದೇವರು ವಾಗ್ದಾನ ಮಾಡಿದ ದೇಶವನ್ನು ಪ್ರವೇಶಿಸಿದರು.

ಸುಮಾರು 400 ವರ್ಷಗಳವರೆಗೆ, 12 ಇಸ್ರಾಯೇಲ್ ಜನಾಂಗಗಳು ಮೋಶೆಯ ನ್ಯಾಯಶಾಸ್ತ್ರಕ್ಕೆ ಅನುಗುಣವಾಗಿ ನ್ಯಾಯಸ್ಥಾಪಕರಿಂದ ಆಳಲ್ಪಟ್ಟವು. ಬೇರೆ ದೇಶಗಳಲ್ಲ ಇರುವಂತೆ ಅವರಿಗೂ ತಮ್ಮದೇ ಆದ ರಾಜನಿರಬೇಕೆಂಬ ಇಚ್ಛೆಯುಂಟಾಗಲು, ದೇವರು ಸೌಲನನ್ನು ಅವರ ರಾಜನನ್ನಾಗಿ ನೇಮಿಸಿದರು. ಸೌಲನು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದನು, ಆ ಬಳಿಕ ದಾವೀದನು 40 ವರ್ಷಗಳ ತನಕ ರಾಜ್ಯಭಾರ ನಡೆಸಿ, ನಂತರ ಅವನ ಮಗನಾದ ಸೊಲೊಮೊನನು 40 ವರ್ಷಗಳ ತನಕ ಆಡಳಿತ ನಡೆಸಿದನು. ಸೊಲೊಮೊನನ ಆಳ್ವಿಕೆಯ ಸಮಯದಲ್ಲಿ, ಇಸ್ರಾಯೇಲ್ ದೇಶವು ತನ್ನ ಅತಿ ವೈಭವಯುತ ಸ್ಥಿತಿಯಲ್ಲಿದ್ದು, ಮೊತ್ತ ಮೊದಲ ದೇವಾಲಯವನ್ನು ಈ ಸಮಯದಲ್ಲಿ ನಿರ್ಮಿಸಲಾಯಿತು, ಆದರೆ ಮುದಿವಯಸ್ಸಿನಲ್ಲಿ ಸೊಲೊಮೊನನ ಮನಸ್ಸು ದೇವರ ಕಡೆಯಿಂದ ವಿಮುಖವಾದುದರಿಂದ ದೇವರು ಅವನಿಗೆ ನಿನ್ನ ಮಗನು 10 ಕುಲಗಳ ಮೇಲೆ ಆಳ್ವಿಕೆ ನಡೆಸಲಾರನು ಎಂಬುದಾಗಿ ಹೇಳುತ್ತಾರೆ.

ಸೊಲೊಮೊನನ ಮರಣಾನಂತರ, ಇಸ್ರಾಯೇಲ್ ದೇಶವು ಇಬ್ಭಾಗವಾಯಿತು, ಮತ್ತು ಉತ್ತರದಲ್ಲಿನ 10 ಕುಲಗಳು ಅನೇಕ ಕೆಟ್ಟ ರಾಜರುಗಳ ಆಳ್ವಿಕೆಯಲ್ಲಿ ನಲುಗಿದವು, ಇವರು ದಾವೀದ ಮತ್ತು ಸೊಲೊಮೊನನ ವಂಶಜರಾಗಿರಲಿಲ್ಲ. ಈ ಉತ್ತರ ಸೀಮೆಯ ರಾಜ್ಯವು ಇಸ್ರಾಯೇಲ್ ಎಂಬ ಹೆಸರನ್ನು ಉಳಿಸಿಕೊಂಡಿತು ಮತ್ತು ಕಾಲಕ್ರಮೇಣ ಅವರು ಸಮಾರ್ಯ ನಗರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ದಕ್ಷಿಣದ ಸಣ್ಣ ರಾಜ್ಯ ಯೂದ ಎಂಬುದಾಗಿ ಕರೆಯಲ್ಪಟ್ಟಿತು ಮತ್ತು ಅದರ ರಾಜಧಾನಿ ಯೆರೂಸಲೇಮ್ ಆಗಿತ್ತು ಹಾಗೂ ದಾವೀದನ ವಂಶಜರು ಇಲ್ಲಿ ರಾಜ್ಯಭಾರ ನಡೆಸಿದರು. ಬೈಬಲ್ ನಲ್ಲಿ, 2 ಅರಸುಗಳು 16 ರಿಂದ ಆರಂಭವಾಗಿ, ದಕ್ಷಿಣ ಸೀಮೆಯನ್ನು ಯೂದ ಎಂಬುದಾಗಿ ಹೆಸರಿಸಿದ ಬಳಿಕ ಇಲ್ಲಿನ ಜನರು “ಯೆಹೂದ್ಯ”ರೆನಿಸಿಕೊಂಡರು.

ಇಸ್ರಾಯೇಲ್ ನ ಉತ್ತರ ಸೀಮೆಯ ಜನರ ದುಷ್ಟತನದಿಂದಾಗಿ, ಅಶ್ಶೂರ್ಯರು ಅವರನ್ನು ಸೋಲಿಸಿ ಸೆರೆಯಾಳುಗಳನ್ನಾಗಿ ಮಾಡಿದರು. ಅಳಿದುಳಿದ ಇಸ್ರಾಯೇಲ್ಯರು ಆ ದೇಶವನ್ನು ಆಕ್ರಮಿಸಿದ ವಿಧರ್ಮೀಯರೊಂದಿಗೆ ಬೆರೆತುಕೊಂಡರು. ಇವರು ಸಮಾರ್ಯರು ಎಂಬುದಾಗಿ ಕರೆಸಿಕೊಂಡರು ಮತ್ತು ಉತ್ತರ ಸೀಮೆಯ ಇಸ್ರಾಯೇಲ್ ನ 10 ಕುಲಗಳು ಯಾವತ್ತೂ ಒಂದು ದೇಶವಾಗಿ ಒಂದುಗೂಡಲಿಲ್ಲ.

ಯೂದದ ದಕ್ಷಿಣ ಸೀಮೆಯ ಜನರು ಬೇರೆ ದೇವರುಗಳನ್ನು ಮಾಡಿಕೊಂಡದ್ದರಿಂದ ಅಂತಿಮವಾಗಿ ಅವರು ಬೆಬಿಲೋನಿಯನ್ನರ ಸೆರೆಯಾಳುಗಳಾಗಿ ಕಷ್ಟಪಡಬೇಕಾಯಿತು, ದೇವಾಲಯವನ್ನು ಸಹ ನಾಶಮಾಡಲಾಯಿತು, ಆದರೆ 70 ವರ್ಷಗಳ ತರುವಾಯ, ಯೆಹೂದ್ಯರು ಯೂದಕ್ಕೆ ಮರಳಿದರು, ಯೆರೂಸಲೇಮ್ ದೇವಾಲಯವನ್ನು ಪುನಃ ನಿರ್ಮಿಸಿದರು ಮತ್ತು ದಾವೀದ ವಂಶಜ ರಾಜರುಗಳು ಆಳ್ವಿಕೆಯನ್ನು ಮುಂದುವರೆಸಿದರು.

ಕ್ರಿಸ್ತನ ಸಮಯದಲ್ಲಿ, ಯೂದ ಸೀಮೆಯು ಯೂದಾಯ ಎಂಬುದಾಗಿ ಕರೆಯಲ್ಪಟ್ಟಿತ್ತು ಮತ್ತು ರೋಮನ್ನರ ಆಳ್ವಿಕೆಯಲ್ಲಿತ್ತು. ಯೇಸು ಕ್ರಿಸ್ತ ಮತ್ತು ಅವರ ಶಿಷ್ಯರು ಯೂದಾಯ ಸೀಮೆಯುದ್ದಕ್ಕೂ ಸುವಾರ್ತೆ ಸಾರುತ್ತಾ ಇಸ್ರಾಯೇಲ್ ಮನೆತನದ ಕಳೆದುಹೋದ ಕುರಿಗಾಗಿ ಹುಡುಕುತ್ತಿದ್ದರು. ಮೂರೂವರೆ ವರ್ಷಗಳ ಸುವಾರ್ತಾ ಸೇವೆಯ ಬಳಿಕ, ಯೆಹೂದ್ಯರು ಯೇಸುವನ್ನು ತಮ್ಮ ಮೆಸ್ಸಾಯ ಎಂಬುದನ್ನು ನಿರಾಕರಿಸಿದರು ಮತ್ತು ಅವನನ್ನು ಶಿಲುಬೆಗೇರಿಸುವಂತೆ ರೋಮ್ ಚಕ್ರವರ್ತಿಯ ಮನವೊಲಿಸಿದರು. 3 ದಿನಗಳ ಬಳಿಕ ಅವರು ಮರಣದಿಂದ ಎದ್ದು ಬಂದರು ಮತ್ತು ಸ್ವರ್ಗದಲ್ಲಿನ ಪಿತನ ಬಲಭಾಗದಲ್ಲಿ ಇರಲು ಸ್ವರ್ಗಕ್ಕೆ ಏರಿ ಬರುವ ಮೊದಲು ತನ್ನ ಶಿಷ್ಯರಿಗೆ ಕಾಣಿಸಿಕೊಂಡರು.

ಯೇಸು ಶಿಲುಬೆಗೇರುವ ಸ್ವಲ್ಪ ಮೊದಲು- “ತನ್ನನ್ನು ನಿರಾಕರಿಸಿದ್ದಕ್ಕೆ ಶಿಕ್ಷೆಯಾಗಿ, ಯೆರೂಸಲೇಂ ಹೊತ್ತಿ ಉರಿಯುತ್ತದೆ, ದೇವಾಲಯ ನಾಶವಾಗುತ್ತದೆ, ಮತ್ತು ಯೆಹೂದ್ಯರನ್ನು ಎಲ್ಲ ದೇಶಗಳಲ್ಲಿ ಸೆರೆಯಾಳಾಗಿ ಸೆರೆಹಿಡಿಯುವರು” ಎಂಬುದಾಗಿ ಪ್ರವಾದನೆ ಮಾಡಿದರು. ಕ್ರಿ. ಶ 70 ರಲ್ಲಿ ರೋಮನ್ ಚಕ್ರವರ್ತಿ ಟೈಟಸ್ ಯೆರೂಸಲೇಮನ್ನು ವಶಪಡಿಸಿಕೊಂಡಾಗ ಈ ಪ್ರವಾದನೆಯು ನೆರವೇರಿತು. 1800 ವರ್ಷಗಳಿಗಿಂತಲೂ ಹೆಚ್ಚು ಸಮಯ, ಯೆಹೂದ್ಯರು ಎಲ್ಲಾ ದೇಶಗಳಲ್ಲಿ ಅಲ್ಲಲ್ಲಿ ಚೆದುರಿಕೊಂಡಿದ್ದರು.

ಬಳಿಕ 1948 ರಲ್ಲಿ, ಅಸಾಧ್ಯವೆಂದೆಣಿಸಿದ್ದು ಸಂಭವಿಸಿತು. ಇಸ್ರೇಲ್ ದೇಶದ ಸ್ಥಾಪನೆಯಾಯಿತು ಮತ್ತು ಯೆಹೂದ್ಯರು ಮತ್ತೊಮ್ಮೆ ವಾಗ್ದಾನದ ದೇಶವನ್ನು ಪಡೆದುಕೊಂಡರು. ಹೆಚ್ಚಿನ ಕ್ರೈಸ್ತರು ಇದನ್ನು ದೇವರ ಪವಾಡ ಮತ್ತು ಅನುಗ್ರಹವೆಂಬುದಾಗಿ ಘೋಷಿಸಿದರು, ಆದರೆ ಇದು ನಿಜವಾಗಿಯೂ ದೇವರ ಅನುಗ್ರಹವೆ, ಅಥವಾ ನಿಗೂಢ ಶಕ್ತಿಗಳ ಕೈವಾಡವೆ? ಉತ್ತರ ಈ ಫಿಲ್ಮ್ ನಲ್ಲಿದೆ.

 

 

 

mouseover